ಕಾರ್ಕಳ:ಹಣಕಾಸು ವ್ಯವಹಾರ ವಂಚನೆ:ಕೇಸು ದಾಖಲು-Times Of Karkala

 ಕಾರ್ಕಳ:ಹಣಕಾಸು ವ್ಯವಹಾರ ವಂಚನೆ:ಕೇಸು ದಾಖಲು-Times Of Karkala

ಕಾರ್ಕಳ:ಗ್ರಾನೈಟ್ ಫ್ಯಾಕ್ಟರಿ ತೇರೆಯುವ  ವಿಚಾರದಲ್ಲಿ ಹಣಕಾಸಿಗೆ ಸಂಬಂಧಿಸಿ ನಂಬಿಕೆ ದ್ರೋಹ ಎಸಗಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಕುರಿತು ಕುಕ್ಕುಂದೂರಿನ ನಕ್ರೆ  ಮುರುಕೇಶ್  ವಿರುದ್ಧ ಪಾಲುದಾರರು  ನ್ಯಾಯಾಲಯದ ಖಾಸಗಿ  ದೂರು ನಜಿಡಿದಕ್ಕೆ ಸಂಬಂದಿಸಿದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳ ಮೂಲದ ಕಲ್ಲೋರ್ನ್ಯೂಲ್ಪಝಕುಪ್ಪಾಡಿ  ಸುಲ್ತಾನ್ ನಿವಾಸಿ  ಜತಿನ್ ರಾಜ್ ಎಂವಿ ಎಂಬುವರು ಪೌಜಿಯಾ  ಮಹಮ್ಮದಹ್ ಶಫಿ ಮತ್ತು ಆಪಾದಿತ ಮುರುಕೇಶ್ ಟಿ ಇವರೆಲ್ಲ ಒಟ್ಟುಗೂಡಿ ಪಾಲುದಾರಿಕೆಯಲ್ಲಿ ಕುಕ್ಕುಂದೂರು ಏಷ್ಯನ್ ಗ್ರಾನೈಟ್ ಪ್ಯಾಕ್ಟರಿ ಎಂಬ ಹೆಸರಿನಲ್ಲಿ ಗ್ರಾನೈಟ್ ಕತ್ತರಿಸುವ ಮತ್ತು ಪಾಲಿಶ್ ಮಾಡುವ ವ್ಯವಹಾರ ಆರಂಭಿಸಿದ್ದರು. ಕುಕ್ಕುಂದೂರು ಘಟಕಕ್ಕೆ ಸ್ಥಿರಾಸ್ಥಿಗಳನ್ನು ಖರೀದಿಸಲು ನಿರ್ಧರಿಸಿದ್ದರು. ಇದಕ್ಕೆ ಜಿತಿನ್ ರಾಜ್ ಮತ್ತು ಪಾಲುದಾರರಾದ ಮಹಮ್ಮದ್ ಶಫಿ ಅವರು ಕುಕ್ಕುಂದೂರಿನನ ನಕ್ರೆಯ ಮೂರುಕೇಶ್ ಅವರಿಗೆ 10 ಲಕ್ಷ ರೂ. ಮುಂಗಡ ಹಣವನ್ನು ಹಂತ ಹಂತವಾಗಿ ಬ್ಯಾಂಕ್ ಮುಖಾಂತರ ನೀಡಿದ್ದರು. ಬಳಿಕವೂ ಪಾಲುದಾರಿಕೆ ಸಮಸ್ಥೆಗೆ ಯಂತ್ರೋಪಕರಣಗಳನ್ನು ಖರಿಸಲು ಮತ್ತು ಸಾಗಾಟ ಮತ್ತು ಇತ್ಯಾದಿಗಳಿಗೆ ಹಣ ಹೂಡಿಕೆ ಮಾಡಿದ್ದರು.

 ಸೆ.13  ರಂದು ಜತಿನ್ ರಾಜು ಎಂವಿ ಕುಕ್ಕುಂದೂರಿಗೆ ಬಂದು ಸ್ಥಿರಾಸ್ತಿಗಳ ನೋಂದಣಿಗೆಂದು ಸಂಸ್ಥೆಗೆ ಬಂದಾಗ ಯಂತ್ರೋಪಕರಣಗಳು ಇರಲಿಲ್ಲ ಹೆಸರನ್ನು ಏಷ್ಯನ್ ಗ್ರಾನೈಟ್ ಪ್ಯಾಕ್ಟರಿ ಬದಲಾಗಿ ಏಷಿಯನ್ ಗ್ರಾನೈಟ್ ಎಂದು ಬದಲಾಯಿಸಿದ್ದು ಬಹಿರಂಗವಾಗಿದೆ. ಡೋರ್ ನಂಬರ್ ಕೂಡ ಬದಲಾಯಿಸಿದ್ದರು . ಸ್ಥಿರಾಸ್ತಿಗಳನ್ನೂ ಆಪಾದಿತ ಮುರುಕೇಶ್  ತನ್ನ ಹಾಗೂ  ವೀರರಾಜ್ ಟಿ ಪಾಂಟ್ಯ ರಾಜನ್ ಎಂಬುವರ ಹೆಸರಿಗೆ ವರ್ಗಾಯಿಸಿದ್ದ. ನಂಬಿಕೆಗೆ ದ್ರೋಹ, ಯಂತ್ರೋಪಕರಣಗಳ ಕಳವು ಸಂಬಂಧಿಸಿ ನ್ಯಾಯಾಲಯದ್ಲಲಿ ಖಾಸಗಿ ದೂರು ಸಲ್ಲಿಕೆಯಾಗಿದೆ.

ಜಾಹೀರಾತು


  

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget