ಭೀಕರ ಅಪಘಾತದಲ್ಲಿ ಧಾರಾವಾಹಿ ನಟಿಯ ಮಗಳ ದಾರುಣ ಸಾವು-Times Of Karkala

 ಭೀಕರ ಅಪಘಾತದಲ್ಲಿ  ಧಾರಾವಾಹಿ ನಟಿಯ ಮಗಳ ದಾರುಣ ಸಾವು-Times Of Karkala


ಬೆಂಗಳೂರು: ಬೆಂಗಳೂರಿನ ಕೋಣನಕುಂಟೆ ವಾಜರಹಳ್ಳಿಯಲ್ಲಿ  ದ್ವಿಚಕ್ರ ವಾಹನದಲ್ಲಿ ತಾಯಿ ಮಗಳು ಪ್ರಯಾಣಿಸುತ್ತಿದ್ದ ಗಾಡಿಯು ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಆರು ವರ್ಷದ ಸಮನ್ವಿ ಸ್ಥಳದಲ್ಲೇ ಸಾವನಪ್ಪಿದ್ದಾಳೆ.

ರಿಯಾಲಿಟಿ  ಷೋ ಒಂದರಲ್ಲಿ ಭಾಗಿಯಾಗಿದ್ದ , ತಾಯಿ ಅಮೃತ  ಮತ್ತು ಮಗಳು ಸಮನ್ವಿ ಕಳೆದ ವಾರವಷ್ಟೇ  ರಿಯಾಲಿಟಿ ಶೋನಿಂದ ಎಲಿಮಿನೇಟ್ ಆಗಿದ್ದರಷ್ಟೇ. 

ಅಪಘಾತದಲ್ಲಿ ತಾಯಿ ಅಮೃತ ಗಾಯಗೊಂಡಿದ್ದು, ಅವರನ್ನು  ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.

ಗಾಯಗೊಂಡ ಅಮೃತ ನಾಯ್ಡು ಅವರು  ಕಳೆದ ಹಲವು ವರ್ಷಗಳಿದ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಬಾಲಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಗೆ ರವಾನಿಸಲಾಗಿದೆ.

ಕುಮಾರಸ್ವಾಮಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget