ಕಾರ್ಕಳದಲ್ಲಿ ನಿಲ್ಲುತ್ತಿಲ್ಲ ಗೋಕಳ್ಳತನ ಪ್ರಕರಣ. ನಿಟ್ಟೆಯಲ್ಲಿಯೂ ಹಟ್ಟಿಗೆ ನುಗ್ಗಿ ಗೋ ಕಳ್ಳತನ. ರಾತ್ರೋರಾತ್ರಿ ಐದು ದನಗಳನ್ನು ಕಳವುಗೈದ ಕಳ್ಳರು! ಗೋ ಕಳ್ಳರಿಗೆ ಕಡಿವಾಣ ಹಾಕುವವರ್ಯಾರು?-Times of karkala

ಕಾರ್ಕಳದಲ್ಲಿ ನಿಲ್ಲುತ್ತಿಲ್ಲ ಗೋಕಳ್ಳತನ ಪ್ರಕರಣ.

ನಿಟ್ಟೆಯಲ್ಲಿಯೂ ಹಟ್ಟಿಗೆ ನುಗ್ಗಿ ಗೋ ಕಳ್ಳತನ. 

ರಾತ್ರೋರಾತ್ರಿ ಐದು ದನಗಳನ್ನು ಕಳವುಗೈದ ಕಳ್ಳರು!

ಗೋ ಕಳ್ಳರಿಗೆ ಕಡಿವಾಣ ಹಾಕುವವರ್ಯಾರು?

ಕಾರ್ಕಳದಲ್ಲಿ ಗೋ ಕಳ್ಳತನ ಎಗ್ಗಿಲ್ಲದೆ ಸಾಗುತ್ತಿದೆ.ಇತ್ತೀಚೆಗೆ ಕಾರ್ಕಳದ ಕರಿಯಕಲ್ಲಿನಲ್ಲಿ ಯಶೋಧ ಆಚಾರ್ಯ ಎಂಬುವವರಿಗೆ ಸೇರಿದ ಗೋ ಕಳ್ಳತನ ಪ್ರಕರಣ ಇನ್ನೂ ಬಿಸಿಯಾಗಿರುವಾಗಲೇ ನಿಟ್ಟೆಯಲ್ಲಿ ಮತ್ತೆ ಗೋ ಕಳ್ಳತನದ ವರದಿಯಾಗಿದೆ. 

ನಿಟ್ಟೆಯ ಲೆಮಿನಾ ಕ್ರಾಸ್ ನಿವಾಸಿ  ರಾಜೇಶ್ ಆಚಾರ್ಯ ಎಂಬುವವರ ಮನೆಯಿಂದ ಜ.10ರಂದು ರಾತ್ರಿ 2:30 ಗಂಟೆ ಸುಮಾರಿಗೆ ಆವರಣ ಗೋಡೆ ಇಲ್ಲದ ಸಿಮೆಂಟ್ ಶೀಟ್ ಹಾಕಿದ ಚಪ್ಪರದಲ್ಲಿ ಕಟ್ಟಿದ್ದ ದನಗಳ ಪೈಕಿ 3 ಕಪ್ಪು ಬಣ್ಣದ ದನಗಳನ್ನು ಅವುಗಳಿಗೆ ಕಟ್ಟಿದ್ದ ಹಗ್ಗವನ್ನು ಯಾವುದೋ ಹರಿತವಾದ ಆಯುಧದಿಂದ ತುಂಡು ಮಾಡಿ ಹಾಗೂ 2 ಕಪ್ಪು ಬಣ್ಣದ ಹೆಣ್ಣು ಕರುಗಳನ್ನು ಅವುಗಳಿಗೆ ಕಟ್ಟಿದ್ದ ಹಗ್ಗದ ಸಮೇತ  ನಾಲ್ಕು ಚಕ್ರದ ವಾಹನದಲ್ಲಿ ಬಂದು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ 3 ದನಗಳ ಅಂದಾಜು ಮೌಲ್ಯ 15,000/- ರೂಪಾಯಿ ಹಾಗೂ 2 ಹೆಣ್ಣು ಕರುಗಳ ಅಂದಾಜು ಮೌಲ್ಯ 5,000/- ಎಂದು ಅಂದಾಜಿಸಲಾಗಿದೆ.

 ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಹೈನುಗಾರಿಕೆಯನ್ನೇ ಬದುಕಿಗೆ ದಾರಿಯಾಗಿಸಿಕೊಂಡ ಬಡ ಕುಟುಂಬಕ್ಕೆ ದನಗಳ್ಳರು ಬರೆಯೆಳೆಯುತ್ತಿದ್ದಾರೆ. ಹಟ್ಟಿಯಿಂದಲೇ ದನಗಳವು ಪ್ರಕರಣಗಳಿಂದ ರೋಸಿ ಹೋಗಿದ್ದಾರೆ.

ಜಾಹೀರಾತು 
























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget