ದುರ್ಗ:ಇ-ಶ್ರಮ ಕಾರ್ಡ ನೋಂದಣಿ ಕಾರ್ಯಕ್ರಮ-Times Of Karkala

 ದುರ್ಗ:ಇ-ಶ್ರಮ ಕಾರ್ಡ ನೋಂದಣಿ ಕಾರ್ಯಕ್ರಮ-Times Of Karkala

 ಕಾರ್ಕಳ : ದುರ್ಗ ಗ್ರಾಮ ಪಂಚಾಯತ್ ಸಭಾಂಗಣ ದಲ್ಲಿ ಗ್ರಾಮ ಪಂಚಾಯತ್, ಯೂತ್ ಫಾರ್ ಸೇವಾ ಸಂಸ್ಥೆ ಹಾಗೂ ಹಸಿರೇ ಉಸಿರು ಪರಿಸರ ಸಂಘಟನೆ ತೆಳ್ಳಾರು ಇವರ ಸಹಭಾಗಿತ್ವದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಶ್ರಮ್ ಕಾರ್ಡ್ ನೋಂದಣಿ ಕಾರ್ಯಕ್ರಮವು ಜರುಗಿತು. ಪಂಚಾಯತ್ ಸದಸ್ಯೆ ಉಮಾವತಿ ಯವರು ಸ್ವಾಗತವನ್ನು ನೇರವೇರಿಸಿದರು. ಯೂತ್ ಫಾರ್ ಸೇವಾ ಸಂಸ್ಥೆಯ ಸ್ವಯಂ ಸೇವಕರಾದ ರಾಘವೇಂದ್ರ ಪ್ರಭು ರವರು ಈ ಶ್ರಮ್ ಕಾರ್ಡ್ ನ ಮಹತ್ವ ಹಾಗೂ ಅಗತ್ಯತೆಯನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅಧ್ಯಕ್ಷರಾದ ಸತೀಶ್ ನಾಯಕ್ ರವರು ನಮ್ಮ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ನೊಂದಣಿಗೊಂಡ ಹಲವಾರು ಕಾರ್ಮಿಕರಿಗೆ ವಿವಿಧ ಸೌಲಭ್ಯಗಳು ದೊರಕಿದೆ. ಅಂತೆಯೇ ಇಂದು ನಾವು ಅಸಂಘಟಿತ ವಲಯದ ಕಾರ್ಮಿಕರಿಗೆ ಕಾರ್ಡ್  ನೋಂದಣಿ ಆಯೋಜಿಸಲಾಗಿದೆ.ಇದರ ಪ್ರಯೋಜನವನ್ನು ಗ್ರಾಮಸ್ಥರೆಲ್ಲರೂ ಪಡೆದುಕೊಳ್ಳಿ. ಇಂತಹ ಕಾರ್ಯಕ್ರಮಗಳು ಸಂಘ ಸಂಸ್ಥೆಗಳ ಸಹಕಾರ ದೊಂದಿಗೆ ನಿರಂತರವಾಗಿ ನಮ್ಮ ಪಂಚಾಯತ್ ನಲ್ಲಿ ನಡೆಯಲಿದೆ ಎಂದು ತಿಳಿಸಿದರು. 


ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಸುಶೀಲ, ಹಸಿರೇ ಉಸಿರು ಸಂಘಟನೆಯ ರಘುರಾಮ ಪಾಟ್ಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿದ್ಯಾ ಪಿ. ಶೆಟ್ಟಿ, ಹಾಗೂ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು. ಗ್ರಾಮದ ಕಾನೂನು ವಿದ್ಯಾರ್ಥಿ ಕುಮಾರಿ ಪವಿತ್ರ ರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget