ಭಾರತೀಯ ಜೈನ್ ಮಿಲನ್, ಕಾರ್ಕಳ ಯುವ ಜೈನ್ ಮಿಲನ್, ಕಾರ್ಕಳ ಇದರ ಡಿಸೆಂಬರ್ ತಿಂಗಳ ಮಾಸಿಕ ಸಭೆ-Times Of Karkala .

ಭಾರತೀಯ ಜೈನ್ ಮಿಲನ್, ಕಾರ್ಕಳ ಯುವ ಜೈನ್ ಮಿಲನ್, ಕಾರ್ಕಳ ಇದರ ಡಿಸೆಂಬರ್ ತಿಂಗಳ ಮಾಸಿಕ ಸಭೆ-Times Of Karkala . 


ಕಾರ್ಕಳ: ಭಾರತೀಯ ಜೈನ್ ಮಿಲನ್ ಕಾರ್ಕಳ ಮತ್ತು ಯುವ ಜೈನ್ ಮಿಲನ್ ಕಾರ್ಕಳ ಇದರ ಡಿಸೆಂಬರ್ ತಿಂಗಳ ಮಾಸಿಕ ಸಭೆಯು ದಿನಾಂಕ 02.01.2022 ನೇ ಭಾನುವಾರದಂದು ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತೀಯ ಜೈನ್ ಮಿಲನ್ ವಲಯ 8 ರ ಪ್ರಧಾನ ಕಾರ್ಯದರ್ಶಿಗಳಾದ ವೀರ್ ರಾಜೇಶ್ ಎಂ. ಇವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಶ್ರಾವಕರು ನಿತ್ಯ ಅನುಸರಿಸಬೇಕಾದ ಕ್ರಿಯೆಗಳು, ಜೀವನದ ಮೌಲ್ಯ ಮತ್ತು ವ್ಯಕ್ತಿತ್ವ ವಿಕಸನದ ತಿಳಿಸಿದರು.

ಸಭೆಯ ಆರಂಭದಲ್ಲಿ ಪ್ರಸ್ತುತ ಸಾಲಿನ ಮಿಲನ್ ಅಧ್ಯಕ್ಷರಾದ ದಿ| ಅಮರನಾಥ್ ಪ್ರಸಾದ್ ಇವರ ಆತ್ಮನಿಗೆ ಸದ್ಗತಿ ದೊರೆಯಲೆಂದು ಮೌನ ಪ್ರಾರ್ಥನೆ ಮಾಡಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ಪುಷ್ಪ ನಮನ ಗೈದರು, ಮಿಲನ್ ಕಾರ್ಯದರ್ಶಿ ವೀರ್ ಜಗದೀಶ್ ಹೆಗ್ಡೆ ನುಡಿ ನಮನ ಸಲ್ಲಿಸಿದರು.

ತದ ನಂತರ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿ ಗಳಿಸಿ ವೀರಾಂಗನ ವಿಜಯ ಕುಮಾರಿ, ಕಾರ್ಕಳದ ಸ್ವರಾಜ್ ಮೈದಾನದ ಬಳಿ ಮಹಾವೀರ ಸರ್ಕಲ್ ನಿರ್ಮಿಸುವಲ್ಲಿ ಕಾರ್ಯನಿರ್ವಹಿಸಿದ ವೀರ್ ರತ್ನವರ್ಮ ಅಜ್ರಿ ಸಾಂತ್ರಬೆಟ್ಟು ಹಾಗೂ ಆನ್ಲೈನ್ ಮಾಧ್ಯಮದಲ್ಲಿ ಜಿನಭಜನಾ ಗಾಯನ ಸೇವಾ ಕೈಂಕರ್ಯವನ್ನು ಗೈಯುತ್ತಿರುವ ವೀರ್ ವಸಂತ್ ಕುಮಾರ್ ಬಂಗ ಇವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಇತ್ತೀಚೆಗೆ ಮೂಡಬಿದ್ರೆ ಮತ್ತು ವೇಣೂರಿನಲ್ಲಿ ಜರುಗಿದ ಕ್ರೀಡಾ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಿಲನ್ ಬಂಧುಗಳನ್ನು ಗುರುತಿಸಿ ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ವೀರ್ ಅಮರನಾಥ್ ಹೆಗ್ಡೆ ಇವರು ವಹಿಸಿದ್ದರು. ಭಾರತೀಯ ಜೈನ್ ಮಿಲನ್ ವಲಯ 8 ರ ನಿರ್ದೇಶಕರಾದ ಶ್ರೀ ಮಹಾವೀರ್ ಹೆಗ್ಡೆ ಅಂಡಾರು, ಜೊತೆ ಕಾರ್ಯದರ್ಶಿಗಳಾದ ವೀರಾಂಗನ ಶಶಿಕಲಾ ಕೆ ಹೆಗ್ಡೆ, ಮಿಲನ್ ಕಾರ್ಯದರ್ಶಿ ವೀರ್ ಜಗದೀಶ್ ಹೆಗ್ಡೆ, ಯುವ ಮಿಲನ್ ಅಧ್ಯಕ್ಷರಾದ ವೀರ್ ವೀರೇಂದ್ರ ಜೈನ್, ಕಾರ್ಯಕ್ರಮದ ಆತಿಥ್ಯ ವಹಿಸಿದ ವೀರ್ ಶಾಂತಿರಾಜ್ ಹೆಗ್ಡೆ, ವೀರ್ ಸನತ್ ಕುಮಾರ್, ವೀರ್ ಶ್ರೀಧರ್ ಭಂಡಾರಿ, ವೀರ್ ಹೇಮಚಂದ್ರ ಜೈನ್, ವೀರ್ ಸುರೇಂದ್ರನಾಥ್ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಿಲನ್ ಜೊತೆ ಕಾರ್ಯದರ್ಶಿ ವೀರ್ ನಿರಂಜನ್ ಜೈನ್ ವರದಿ ವಾಚಿಸಿದರು. ವೀರಾಂಗನ ವಿಜಯಲಕ್ಷ್ಮಿ ಹೇಮಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು. ವೀರ ಕುವರಿ ನಿಶಾ ಪ್ರಸಾದ್ ಪ್ರಾರ್ಥಿಸಿ ವಂದಿಸಿದರು. ಪಿ.ವಿ. ಸುರೇಶ್ ಇಂದ್ರ ಇವರು ಶಾಂತಿ ಮಂತ್ರ ಪಠಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

                                                                         ಜಾಹೀರಾತುLabels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget