ಕಾರ್ಕಳ: ಸಕಾರಾತ್ಮಕ ಚಿಂತನೆ ನಮ್ಮ ಬದುಕನ್ನು ಬದಲಿಸಬಲ್ಲದು: ಚಂದನ್ ರಾವ್-Times Of Karkala

ಕಾರ್ಕಳ: ಸಕಾರಾತ್ಮಕ ಚಿಂತನೆ ನಮ್ಮ ಬದುಕನ್ನು ಬದಲಿಸಬಲ್ಲದು: ಚಂದನ್ ರಾವ್-Times Of Karkala

ಕಾರ್ಕಳ: ವಿದ್ಯಾರ್ಥಿಗಳು ನಕಾರಾತ್ಮಕ ಚಿಂತನೆಯನ್ನು ಬಿಟ್ಟು ಅವಕಾಶಗಳೆಂಬ ಸಕಾರಾತ್ಮಕತೆಯ ಕಡೆಗೆ ಚಿಂತಿಸಿದರೆ ಅದ್ಭುತವಾದ ಭವಿಷ್ಯ ನಮ್ಮದಾಗುತ್ತದೆ..ಕಲಿಯುವ ಅವಕಾಶ ಸಿಕ್ಕಿದಾಗ ಅದನ್ನೇ ವೃತ್ತಿ ಜೀವನದಲ್ಲಿ ಬಳಸಿಕೊಂಡು ಸಾಧನೆ ಮಾಡಬಹುದು ಎಂದು ವೃತ್ತಿ ಮಾರ್ಗದರ್ಶಕ  ಹಾಗೂ ಯುವ ಉದ್ಯಮಿ  ಚಂದನ್ ರಾವ್ ಉಡುಪಿ ತಿಳಿಸಿದರು.

ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ  ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ವೃತ್ತಿ ಮಾರ್ಗದರ್ಶನದಲ್ಲಿ  ಮಾತನಾಡಿದ ಅವರು ವಾಣಿಜ್ಯ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ನಂತರ ಇರುವ ಅವಕಾಶಗಳ ಕುರಿತು ಸವಿವರವಾಗಿ ತಿಳಿಸಿದರು.


ಈ ಸಂದರ್ಭದಲ್ಲಿ  ವಾಣಿಜ್ಯ ವಿಭಾಗದ ರಾಘವೇಂದ್ರ ರಾವ್,ಅರ್ಥಶಾಸ್ತ್ರ ಉಪನ್ಯಾಸಕ ಉಮೇಶ್ ,ಉಪನ್ಯಾಸಕ ರಾದ ರಾಮಕೃಷ್ಣ ಹೆಗಡೆ ,ಜ್ಞಾನೇಶ್ ಕೋಟ್ಯಾನ್,ಅರ್ಜುನ್ ಶೆಣೈ, ಮಹೇಶ್ ಶೆಣೈ ಉಪಸ್ಥಿತರಿದ್ದರು.. ಕುಮಾರಿ ತ್ರಿಶಾ ಕಾರ್ಯಕ್ರಮ ನಿರೂಪಿಸಿದರು. ಶ್ರೀವತ್ಸ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.ಕುಮಾರಿ ಶೆರಿಲ್ ವಂದಿಸಿದರು

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget