ಮಂಗಳೂರಿನಲ್ಲಿ ಮೊಬೈಲ್ ಕಳ್ಳರನ್ನು ಸಿನಿಮೀಯ ಶೈಲಿಯಲ್ಲಿ ಸೆರೆ ಹಿಡಿದ ಪೊಲೀಸರು..!-Times Of karkala

ಮಂಗಳೂರಿನಲ್ಲಿ ಮೊಬೈಲ್ ಕಳ್ಳರನ್ನು ಸಿನಿಮೀಯ ಶೈಲಿಯಲ್ಲಿ ಸೆರೆ ಹಿಡಿದ ಪೊಲೀಸರು..!-Times Of karkalaಮಂಗಳೂರು:ನಗರದಲ್ಲಿ ಮೊಬೈಲ್ ಕಳ್ಳತನ ಮಾಡಿದ ಬಳಿಕ ಪರಾರಿಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬೆನ್ನಟ್ಟಿ ಹಿಡಿದ ಘಟನೆ ಬುಧವಾರ ನಡೆದಿದೆ. ಒಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗೆ ಶೋಧ ಮುಂದುವರಿದಿದೆ.

ನೀರು ಮಾರ್ಗ ಪಾಲ್ದಾನೆ ನಿವಾಸಿ ಹರೀಶ್ ಮತ್ತು ಅತ್ತಾವರ ಬಾಬು ಗುಡ್ಡೆ ನಿವಾಸಿ ಶಮಂತ್ ಬಂಧಿತ ಆರೋಪಿಗಳು. ಉಳ್ಳಾಲ ನಿವಾಸಿ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ನಗರ ಕಮಿಷನರೇಟ್ ವ್ಯಾಪ್ತಿಯ ಮುಂಭಾಗದ ಮೈದಾನದ ಬಳಿ ರಾಜಸ್ತಾನ ಡೋಲಾಪುರ ನಿವಾಸಿ ಪ್ರೇಮ್ ನಾರಾಯಣ ತ್ಯಾಗಿಯವರ ಮೊಬೈಲ್ ಎಗರಿಸಿ ಆರೋಪಿಗಳು ಪರಾರಿಯಾಗತ್ತಿದ್ದರು. ತ್ಯಾಗಿ ಸಹಿತ ಸಾರ್ವಜನಿಕರು ಆತನನ್ನು ಬೆನ್ನಟ್ಟಿ ಹಿಡಿಯಲು ಮುಂದಾದರು. ಇದನ್ನು ನೋಡಿದ ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದ ಪೊಲೀಸರು ಬೆನ್ನಟ್ಟಿ ಆರೋಪಿ ಶಮಂತ್‌ನನ್ನು ಮಂಗಳೂರು ನಗರದ ನೆಹರು ಮೈದಾನದಲ್ಲಿ ಸೆರೆ ಹಿಡಿದರು.

ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಆತನ ಬಳಿ ಕಳುವಾದ ಮೊಬೈಲ್ ಇರಲಿಲ್ಲ. ಈ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸಿದಾಗ ಆಗಲೇ ಆತ ಮೊಬೈಲನ್ನು ಮತ್ತಿಬ್ಬರು ಸಹಚರರ ಮೂಲಕ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ.

ಆರೋಪಿ ಶಮಂತ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾಗ ಇನ್ನಿಬ್ಬರು ಆರೋಪಿಗಳು ಆತನಿಗೆ ಕರೆ ಮಾಡುತ್ತಿದ್ದರು. ಏನಾದ್ರೂ ತೊಂದರೆ ಆಗಿದೆಯಾ? ಎಲ್ಲಿದ್ದಿಯಾ? ಎಂದು ಕೇಳುತ್ತಾರೆ. ಈ ಜಾಡನ್ನು ಹಿಡಿದು ಪೊಲೀಸರು ಶೋಧ ಮುಂದುವರಿಸಿದರು.

ಪೊಲೀಸರು ಶಮಂತ್ ಜತೆ ನಗರದಲ್ಲಿ ಶೋಧ ಕಾರ್ಯ ಆರಂಭಿಸಿದಾಗ ಪರಾರಿಯಾದ ಆರೋಪಿಗಳಿಂದ ಕರೆ ಬರುತ್ತಲೇ ಇತ್ತು. ಈ ಸಂದರ್ಭದಲ್ಲಿ ನಾನಾ ಸ್ಥಳಗಳನ್ನು ಆರೋಪಿಗಳು ಹೇಳಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರು. ಕೊನೆಗೆ ಸೆರೆಯಾದ ಶಮಂತ್, ಪರಾರಿಯಾದ ಆರೋಪಿಗಳ ಬಳಿ ಊಟಕ್ಕೆ ಹಣ ಕೇಳಿದ.

ಈ ಸಂದರ್ಭದಲ್ಲಿ ಪರಾರಿಯಾದವರು ರೈಲ್ವೇ ಸ್ಟೇಷನ್ ಬಳಿಯ ಮುತ್ತಪ್ಪ ಗುಡಿ ಬಳಿ ಬರಲು ಹೇಳುತ್ತಾರೆ. ಅದೇ ಜಾಗಕ್ಕೆ ಪೊಲೀಸರು ಆರೋಪಿ ಶಮಂತ್‌ನನ್ನು ಕರೆ ತಂದು ವಾಹನದ ಕೆಳಗೆ ಇಳಿಸಿದ್ದು, ಆರೋಪಿ ತನ್ನ ಸಹಚರರಿಗೆ ಕಾಯುತ್ತಿದ್ದ. ಈ ಸಂದರ್ಭದಲ್ಲಿ ರಿಕ್ಷಾದಲ್ಲಿ ಆಗಮಿಸಿದ ಆರೋಪಿಗಳು ಈತನನ್ನು ರಿಕ್ಷಾದಲ್ಲಿ ಕುಳಿತುಕೊಳ್ಳಲು ಹೇಳಿ ಹೊರಟರು. ಪೊಲೀಸರು ಅವರನ್ನು ಬೆನ್ನಟ್ಟಲು ಆರಂಭಿಸಿದರು. ಅಪಾಯದ ಬಗ್ಗೆ ಮುನ್ಸೂಚನೆ ದೊರೆತ ಆರೋಪಿಗಳು ರಿಕ್ಷಾದಿಂದ ಇಳಿದು ಪರಾರಿಗೆ ಯತ್ನಿಸಿದರು

ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವ ಪ್ರಯತ್ನ ಮಾಡಿದರು. ಇವರಲ್ಲಿ ಶಮಂತ್ ಮತ್ತು ಹರೀಶ್‌ನನ್ನು ಕೆ.ಬಿ. ಕಟ್ಟೆ ಜಂಕ್ಷನ್ ಬಳಿ ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳ್ಳಾಲದ ಆರೋಪಿ ರಾಜೇಶ್ ಪರಾರಿಯಾಗಿದ್ದಾನೆ. ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ತಂಡವಾಗಿ ಮೊಬೈಲ್ ಕಳವು, ಸರ ಕಳವು ಸೇರಿದಂತೆ ಇನ್ನಿತರ ದುಷ್ಕೃತ್ಯದಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಸಮಗ್ರ ವಿಚಾರಣೆ ನಡೆಸಿದ ಮತ್ತಷ್ಟು ಪ್ರಕರಣ ಬಯಲಿಗೆ ಬರುವ ಸಾಧ್ಯತೆಯಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಮೊಬೈಲ್ ಹಾಗೂ ಇತರ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಲು ಯತ್ನಿಸಿದ ಅರೋಪಿಗಳನ್ನು ಬೆನ್ನಟ್ಟಿ ಹಿಡಿದವರು ಪೊಲೀಸ್ ಕಮೀಷನರ್ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವರುಣ ಆಳ್ವ ಎ ಆರ್ ಸ್ ಐ   ಅವರು. ವರುಣ ಅವರ ಕರ್ತವ್ಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ.

ಜಾಹೀರಾತು 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget