ಕಾರ್ಕಳ: ನೀರಿನ ಬಿಲ್ ಬಾಕಿ ಉಳಿಸಿಕೊಂಡವರಿಗೆ ಪುರಸಭೆ ಅಧಿಕಾರಿಗಳಿಂದ ಎಚ್ಚರಿಕೆ-Times Of Karkala

ಕಾರ್ಕಳ: ನೀರಿನ ಬಿಲ್ ಬಾಕಿ ಉಳಿಸಿಕೊಂಡವರಿಗೆ  ಪುರಸಭೆ ಅಧಿಕಾರಿಗಳಿಂದ ಎಚ್ಚರಿಕೆ-Times Of Karkala 

ಕಾರ್ಕಳ: ಪುರಸಭೆಯಿಂದ ನೀರಿನ ಸಂಪರ್ಕ ಪಡೆದುಕೊಂಡು ಬಿಲ್ ಪಾವತಿಗೆ ಬಾಕಿ ಇರಿಸಿಕೊಂಡವರ ನೀರಿನ ಸಂಪರ್ಕ ಸ್ತಗಿತಕ್ಕೆ ಪುರಸಭೆ ಅಧಿಕಾರಿಗಳು ಮುಂದಾಗಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ ನೇತೃತ್ವದಲ್ಲಿ ರೆವೆನ್ಯೂ ಆಫಿಸರ್ ಸಂತೋಷ್ ಸಹಿತ ನೀರು ಸರಬರಾಜು ವಿಭಾಗದ ಸಿಬ್ಬಂದಿಗಳನ್ನು  ಒಳಗೊಂಡ ತಂಡ ನಗರದಲ್ಲಿ ನೀರಿನ ಬಿಲ್ ಪಾವತಿಸದ  ಮನೆ, ಹೊಟೇಲ್, ಅಂಗಡಿಗಳ ಸಂಪರ್ಕ ಕಟ್ ಮಾಡುವ ಕಾರ್ಯಾಚರಣೆ ನಡೆಸಿದರು.

ಉಡುಪಿ ಬಸ್ ಸ್ಟೇಂಡ್, ಮಾರುಕಟ್ಟೆ ರಸ್ತೆ, ಮುಂತಾದ ಕಡೆಗಳಲ್ಲಿ ನೀರಿನ ಬಿಲ್ ಪಾವತಿಸದವರ ನೀರಿನ ಸಂಪರ್ಕ ಕಡಿತಕ್ಕೆ ಮುಂದಾದರು. ಪುರಸಭೆಗೆ ನೀರಿನ ಬಿಲ್, ತೆರಿಗೆ ಬಿಲ್ ಇತ್ಯಾದಿಗಳನ್ನು ನಾಗರಿಕರು ಸರಿಯಾಗಿ ಸರಿಯಾದ ಸಮಯಕ್ಕೆ ಪಾವತಿಸುತ್ತಿಲ್ಲ. ಅನೇಕ ಸಲ ಸೂಚನೆಗಳನ್ನು ನೀಡಿಯೂ ಪಾವತಿಸಿಲ್ಲ. ನೀರಿನ, ತೆರಿಗೆ ಬಿಲ್ ಬಾಕಿ ಇರಿಸಿಕೊಂಡವರು ಕೂಡಲೇ ಪಾವತಿಸಿ ಸಹಕರಿಸುವಂತೆ ಅವರು ಮನವಿ ಮಾಡಿಕೊಂಡರು.

                                                                         ಜಾಹೀರಾತು

































Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget