ಕಾರ್ಕಳ ನಗರ ಠಾಣೆ ಎಸ್ ಐ ಮಧು ಬಿ ಇ ವರ್ಗಾವಣೆ-Times of karkalaಕಾರ್ಕಳ; ಕಾರ್ಕಳ ನಗರ ಠಾಣೆ ಸಬ್ ಇನ್ಸ್ ಪೆಕ್ಡರ್ ಮಧು ಬಿ.ಇ. ಅವರಿಗೆ ವರ್ಗಾವಣೆಯಾಗಿದೆ. ಕುಂದಾಪುರ ತಾಲೂಕಿನ ಕೋಟ ಪೊಲೀಸ್ ಠಾಣೆಗೆ ಅವರು ವರ್ಗಾವಣೆ ಗೊಂಡು ತೆರಳಲಿದ್ದಾರೆ.

ಕಳೆದ 2 ವರ್ಷ 2 ತಿಂಗಳುಗಳ ಕಾಲ ಕಾರ್ಕಳ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು..ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದರು.

ನಗರದೊಳಗೆ ವ್ಯಾಪಾಕವಾಗಿ ನಡೆಯುತಿದ್ದ ಗೋಕಳ್ಳತನ,ಇತ್ಯಾದಿ ಪ್ರಕರಣಗಳನ್ನು ಪತ್ತೆ ಹಚ್ಚಿ ನಿಯಂತ್ರಣ ತರುವಲ್ಲಿ ಶ್ರಮಿಸಿದ್ದರು.ಕೊರೊನಾ, ಲಾಕ್ ಡೌನ್ ಅವಧಿಯಲ್ಲಿ ಕಾನೂನಿಗೆ ತೊಡಕಾಗದ ರೀತಿ ಜನಸಾಮಾನ್ಯರ ಜನಜೀವನಕ್ಕೆ ಹೆಚ್ಚಿನ ತೊಂದರೆಯಾಗದ ರೀತಿ ಕರ್ತವ್ಯ ಪಾಲನೆ ಮಾಡಿ ಸುಶೂತ್ರವಾಗಿ ನಿಭಾಯಿಸಿರುವುದು ಇವರ ಕರ್ತವ್ಯದ ನಿರ್ವಹಣೆಯಾಗಿತ್ತು. 

ಸಾಮಾನ್ಯ ಜನರು ಸಮಸ್ಯೆಗಳನ್ನು ನೇರ ಇವರ ಬಳಿ ತೆರಳಿ ಹೇಳುವಷ್ಟು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ಜನಮೆಚ್ಚಿದ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

                                                                         ಜಾಹೀರಾತುLabels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget