ಕಾರ್ಕಳ: ಕ್ರಿಯೇಟಿವ್‌ ಪ. ಪೂ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜನ್ಮ ದಿನ ಆಚರಣೆ-Times Of Karkala

 ಕಾರ್ಕಳ: ಕ್ರಿಯೇಟಿವ್‌ ಪ. ಪೂ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜನ್ಮ ದಿನ ಆಚರಣೆ-Times Of Karkala ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಸಿಡಿಲ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನದ ಆಚರಣೆ ನಡೆಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಉಪನ್ಯಾಸಕ ವಿನಾಯಕ್ ಜೋಗ್ ಅವರು ಇಡೀ ವಿಶ್ವಕ್ಕೆ ಭಾರತೀಯತೆ ಮತ್ತು ಸನಾತನ ಧರ್ಮದ ಹಿರಿಮೆಯನ್ನು ತೋರಿಸಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದರು. ಯುವಶಕ್ತಿ ದೇಶದ ಆಸ್ತಿ. ಯಾವುದನ್ನಾದರೂ ಬದಲಿಸುವ ಸಾಮರ್ಥ್ಯ ಯುವಜನರಿಗೆ ಇದೆ.ಭರತವರ್ಷದ ವೇದ ಪರಂಪರೆ,ಜ್ಞಾನ, ಅಧ್ಯಾತ್ಮಿಕ ಸಾಧನೆಗಳು,ಭಕ್ತಿ ಮತ್ತು ಮುಕ್ತಿ, ಜನರ ಸೇವೆಯ ಕುರಿತು ವಿವೇಕಾನಂದರು ಅಪೂರ್ವವಾದ ಕಾಣಿಕೆಯನ್ನು ನೀಡಿದ್ದಾರೆ. ಇಡೀ ವಿಶ್ವವೇ ಪಾಶ್ಚಾತ್ಯ ವಿಚಾರಧಾರೆಗಳ ಕಡೆಗೆ ಸಾಗುತ್ತಿದ್ದಾಗ ಹೆಬ್ಬಂಡೆಯಂತೆ ನಿಂತು ಭಾರತದ ಮೌಲ್ಯಗಳು ಹಾಗೂ ಸಂಸ್ಕೃತಿ ಯ ಕುರಿತು ಬೆಳಕು ಚೆಲ್ಲಿದರು.ಇಂತಹ ಮಹಾನ್ ಚೇತನದ ದಿವ್ಯ ಆದರ್ಶವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ ವಿವೇಕಾನಂದರ 'ಏಳಿ ಎದ್ದೇಳಿ ನಿಲ್ಲದಿರಿ ಗುರಿಮುಟ್ಟುವ ತನಕ' ಎಂಬ ವಾಣಿ ನಮಗೆ ಸ್ಫೂರ್ತಿ ಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕ್ರಿಯೇಟಿವ್‌ ವಿದ್ಯಾಸಂಸ್ಥೆಯ ಸಹಸಂಸ್ಥಾಪಕ ಹಾಗೂ ಹಾಸನದ ಹೆಚ್.ಕೆ.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಮಲ್ ರಾಜ್, ಉಪನ್ಯಾಸಕರಾದ ಉಮೇಶ್, ವಿಘ್ನೇಶ್ ಕಾಮತ್   ಉಪಸ್ಥಿತರಿದ್ದರು.

ಕುಮಾರಿ ಅನಘ ಸ್ವಾಗತಿಸಿದರು. ಕುಮಾರಿ ವಿಂದ್ಯಾ ಕಾರ್ಯಕ್ರಮ ನಿರೂಪಿಸಿದರು. ಕುಮಾರ ಅಮರ್ ವಂದಿಸಿದರು.

ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget