ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ:ಇಬ್ಬರನ್ನು ಬಂದಿಸಿದ ಪೊಲೀಸರು-Times Of Karkala

ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ:ಇಬ್ಬರನ್ನು ಬಂದಿಸಿದ ಪೊಲೀಸರುTimes Of Karkala

ವಿಟ್ಲ : ಸಾಲೆತ್ತೂರಿನಲ್ಲಿ ಅನ್ಯಧರ್ಮದ ಯುವಕರ ತಂಡವೊಂದು ಮದುವೆ ಸಂದರ್ಭದಲ್ಲಿ ತುಳುನಾಡಿನ ಕೊರಗಜ್ಜನ ವೇಷ ಧರಿಸಿ ಅವಹೇಳನ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಗಲ್ಪಾಡಿ ನಿವಾಸಿ ಅಹಮದ್ ಮುಜಿತಾಬ್ (28 ) ಮತ್ತು ಬಾಯಾರು ಪದವು ನಿವಾಸಿ ಮೊಯಿದ್ದೀನ್ ಮುನೀಶ್ (19 ) ಎಂದು ಗುರುತಿಸಲಾಗಿದೆ.

ಉಪ್ಪಳದ ಯುವಕನ ಜೊತೆ  ನಡೆದಿದ್ದ ಕೊಳ್ನಾಡು ಗ್ರಾಮದ ಅಜೀಜ್  ಎಂಬುವರ ಮಗಳ ಮದುವೆಯಲ್ಲಿ ವಧುವಿನ ಮನೆಗೆ ವರನ ಸ್ನೇಹಿತ ಬಳಗ ಆಗಮಿಸಿದ್ದು, ಈ ವೇಳೆ ವರ ಕೊರಗಜ್ಜನ ಹೋಲುವ ವೇಷ ಭೂಷಣ ಧರಿಸಿದ್ದರು . ಈ ವೇಳೆ ಮದುಮಗ  ತಲೆಗೆ ಅಡಿಕೆ ಹಾಳೆ ಟೋಪಿ ,ಮುಖಕ್ಕೆ ಕಪ್ಪು ಬಣ್ಣ ಹಚ್ಚಿಕೊಂಡು ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತ ಬಂದಿದ್ದ ಆರೋಪ ವ್ಯಕ್ತ ವಾಗಿ ಇದು ಬಾರಿ ವಿವಾದಕ್ಕೆ ಕಾರಣವಾಗಿತ್ತು.

ಈ ಸಂಬಂಧ ವಿಟ್ಲ ಪಡ್ನೂರು ಗ್ರಾಮದ ವ್ಯಕ್ತಿಯೊಬ್ಬರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು . ಹಿಂದೂಗಳ ಧಾರ್ಮಿಕ ಭಾವನೆಗೆ ಅಪಮಾನಗೊಳಿಸಿ ದಕ್ಕೆ ತಂದಿದ್ದ ವರ, ವಧುವಿನ ಮನೆಯವರು ಹಾಗೂ ಕೃತ್ಯದಲ್ಲಿ ತೊಡಗಿರುವ ವರನ ಸ್ನೇಹಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಜಾಹೀರಾತು 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget