ಹಸು ಕಳ್ಳತನಕ್ಕೆ ಕಟುಕರ ಹೊಸ ಪ್ಲ್ಯಾನ್ – ಕಾರಿಗೆ ಮದುವೆ ಡೆಕೊರೇಷನ್ ಮಾಡಿ ಕಳ್ಳತನ!-Times Of Karkala

 ಹಸು ಕಳ್ಳತನಕ್ಕೆ ಕಟುಕರ  ಹೊಸ ಪ್ಲ್ಯಾನ್ – ಕಾರಿಗೆ ಮದುವೆ ಡೆಕೊರೇಷನ್ ಮಾಡಿ ಕಳ್ಳತನ!-Times Of  Karkala
ಉಡುಪಿ:ಯಾರಿಗೂ ಅನುಮಾನ ಬಾರದಿರಲೆಂದು ಕಾರಿಗೆ ಮದುವೆ ವಾಹನದಂತೆ ಅಲಂಕಾರ ಮಾಡಿ, ಅದರಲ್ಲಿ ಕಳವು ಮಾಡಿದ್ದ ಹಸುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ಕಳ್ಳರನ್ನು ಬಂಧಿಸಲಾಗಿದೆ.


ಹಸುಗಳನ್ನು ಕಳವು ಮಾಡಲು ಕಳ್ಳರು ಹೊಸ ತಂತ್ರವನ್ನು ರೂಪಿಸಿದ್ದಾರೆ. ಮದುವೆಗೆ ಎಂಬಂತೆ ಅಲಂಕರಿಸಿದ ವಾಹನದಲ್ಲಿ ದನಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದರು. ಈ ವೇಳೆ ಹಿಂದೂ ಜಾಗರಣ ವೇದಿಕೆ ಕರ್ಯಕರ್ತರು ಪ್ರಕರಣವನ್ನು ಭೇದಿಸಿದ್ದು, 15 ಕರುಗಳನ್ನು ರಕ್ಷಿಸಿದ್ದಾರೆ


ಕರಾವಳಿ ಜಿಲ್ಲೆ ಉಡುಪಿಯಲ್ಲಿ ದನಗಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ಅಲ್ಲಲ್ಲಿ ದಾಳಿಗಳು ನಡೆದರೂ ಬಿಡಾಡಿ ದನಗಳನ್ನು ತುಂಬಿಸಿಕೊಂಡು ಕಳ್ಳತನ ಮಾಡುವ ಘಟನೆ ನಿರಂತರವಾಗಿ ನಡೆಯುತ್ತಿದೆ. ಕೆಲ ದನಗಳ ಮೇಲೆ ಪೊಲೀಸ್ ಪ್ರಕರಣಗಳು ದಾಖಲಾದರೂ, ಹಿಂದೂ ಸಂಘಟನೆಗಳು ದಾಳಿ ನಡೆಸಿದರೂ ಹಸುಗಳ ಕಳ್ಳತನ ಕಡಿಮೆಯಾಗಿಲ್ಲ.

ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವದಲ್ಲಿ ಮದುವೆಗೆ ತೆರಳುವ ವಾಹನದ ರೀತಿ ಕಾರನ್ನು ಸಂಪೂರ್ಣ ಡೆಕೋರೇಷನ್ ಮಾಡಲಾಗಿತ್ತು. ಡೆಕೋರೇಷನ್ ಮಾಡಿದ ಕಾರಿನಲ್ಲಿ ಹಸುಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಮಾಹಿತಿ ಆಧರಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ನಂತರ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಎರಡು ವಾಹನದೊಳಗೆ 16ಕ್ಕೂ ಹೆಚ್ಚು ಹಸುಗಳು ಇರುವುದು ಕಂಡುಬಂದಿದೆ. ಹಿಂಸೆ ಕೊಟ್ಟು ಕೈಕಾಲು ಹಾಗೂ ಕುತ್ತಿಗೆ ಬಿಗಿದ ಕಾರಣ ಎರಡು ಹಸುಗಳು ವಾಹನದೊಳಗೆ ಸಾವನ್ನಪ್ಪಿವೆ. ಇದರಿಂದ ಆಕ್ರೋಶಗೊಂಡ ಹಿಂದು ಜಾಗರಣ ವೇದಿಕೆ ಸದಸ್ಯರು ಕಾರಿನ ಗಾಜುಗಳನ್ನು ಪುಡಿ ಮಾಡಿದ್ದಾರೆ. ವಿಷಯ ತಿಳಿದು ಕಾಪು ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಕಳ್ಳರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget