ಕುಡಿದ ಮತ್ತಿನಲ್ಲಿ ಪೊರಕೆಯಲ್ಲಿ ಹೊಡೆದು ಅತ್ತೆಯ ಕೊಲೆಗೈದ ಅಳೆಯ!!!- Times Of Karkala

ಕುಡಿದ ಮತ್ತಿನಲ್ಲಿ ಪೊರಕೆಯಲ್ಲಿ ಹೊಡೆದು ಅತ್ತೆಯ ಕೊಲೆಗೈದ ಅಳೆಯ!!!- Times Of Karkala

ಚಿಕ್ಕಮಂಗಳೂರು: ಮದ್ಯದ ನಶೆಯಲ್ಲಿ ಅಳೆಯನೇ ಅತ್ತೆಯನ್ನು ಪೊರಕೆಯಲ್ಲಿ ಹೊಡೆದು ಕೊಲೆ ಮಾಡಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಎಸ.ಆರ್ ಪುರ  ತಾಲೂಕಿನ ಕಿಚ್ಚಿಬ್ಬಿ ಗ್ರಾಮದಲ್ಲಿ ನಡೆದಿದೆ. 

60  ವರ್ಷದ ಕಾಳಮ್ಮ ಮೃತರಾಗಿದ್ದು 35  ವರ್ಷದ ರಮೇಶ್ ಕೊಲೆ ಆರೋಪಿಯಾಗಿದ್ದಾನೆ .

ಹಳ್ಳಿ ಹಳ್ಳಿಗಳ ಮೇಲೆ ಕೆಲಸಕ್ಕೆ ಹೋಗುವ ರಮೇಶ್ ಭಾನುವಾರ ಅತ್ತೆ ಕಾಳಮ್ಮ ಅವರ ಮನೆಗೆ ಬಂದಿದ್ದಾನೆ. 

ಬಂದ ಕೂಡಲೇ ಜಗಳ ತಗೆದು ಸುಮ್ಮನಾಗಿದ್ದ ರಮೇಶ್ ಬಳಿಕ ಸಂಜೆ ಆತನೇ ಹೋಗಿ 5 ಕ್ವಾಟರ್ ಎಣ್ಣೆ , 1  ಕೆ ಜಿ ಚಿಕನ್ ಹಾಗೂ ಪೋರ್ಕ್ ತಂದಿದ್ದನು.


ರಾತ್ರಿ ಆರೋಪಿ ರಮೇಶ್, ಪತ್ನಿ ಮಂಜುಳಾ ಹಾಗೂ ಅತ್ತೆ ಕಾಳಮ್ಮ ಎಲ್ಲರೂ ಕೂತು ಮದ್ಯ ಸೇವಿಸಿ ಊಟ ಮಾಡಿದ್ದಾರೆ.

ಬಳಿಕ  ಮತ್ತೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಆರೋಪಿ ರಮೇಶ್ ಮೃತ ಕಾಳಮ್ಮ ಮೇಲೆ ಹಲ್ಲೆ ಮಾಡಿ ರಾತ್ರಿ ಹೊರಗಡೆ  ತಳ್ಳಿದ್ದಾನೆ.

ಇತ್ತ ಕಾಳಮ್ಮ ಇಡೀ ರಾತ್ರಿ ಚಳಿಯಲ್ಲಿ ಹೊರಗಿದ್ದು ಸಾವನ್ನಪ್ಪಿದ್ದಾಳೆ. ಬೆಳಿಗ್ಗೆ ವಿಷಯ ತಿಳಿದು ರಮೇಶ್ ನಾಪತ್ತೆಯಾಗಿದ್ದು ಸದ್ಯ ಪೊಲೀಸರು ಆರೋಪಿ ರಮೇಶ್ ನನ್ನು  ಬಂಧಿಸಿದ್ದಾರೆ. 

ಈ ಸಂಬಂಧ ಬಾಳೆಹೊನ್ನೂರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget