ವಾರಾಂತ್ಯ ಕರ್ಫ್ಯೂ ಹಿನ್ನೆಲೆ: ಉಡುಪಿ ಜಿಲ್ಲಾಧಿಕಾರಿಯಿಂದ ನೂತನ ಮಾರ್ಗ ಸೂಚಿ ಪ್ರಕಟTimes Of Karkala

 ವಾರಾಂತ್ಯ ಕರ್ಫ್ಯೂ ಹಿನ್ನೆಲೆ: ಉಡುಪಿ ಜಿಲ್ಲಾಧಿಕಾರಿಯಿಂದ ನೂತನ ಮಾರ್ಗ ಸೂಚಿ ಪ್ರಕಟ:Times Of Karkala

ಉಡುಪಿ: ಕೋವಿಡ್ ಭೀತಿ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನೂತನ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಇದರ ಬೆನ್ನಲ್ಲೇ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಜಿಲ್ಲೆಗೆ ಅನ್ವಯಿಸುವಂತೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.


ಹೊಸ ಮಾರ್ಗ ಸೂಚಿಯ ವಿವರ :

  1. ಜಿಲ್ಲೆಯಾದ್ಯಂತ ಈ ಹಿಂದೆ ಹೊರಡಿಸಿರುವ ಮಾರ್ಗ ಸೂಚಿಗಳನ್ವಯ ಪ್ರತಿ  ದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.
  2.  ಎಲ್ಲ ಕಚೇರಿಗಳು ವಾರದ 5 ದಿನಗಳು ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯಾಚರಿಸುವುದು.
  3. ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ 10 .00 ಗಂಟೆಗೆ ಮೊದಲ್ಗೊಂಡು ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ.ಈ ಸಂದರ್ಭದಲ್ಲಿ  ಆದೇಶದಲ್ಲಿ ಲಗತ್ತಿಸಿರುವ ವಾರಾಂತ್ಯ ಕರ್ಫ್ಯೂ ಗೆ ಸಂಬಂಧಿತ ಮಾರ್ಗಸೂಚಿಗಳನ್ನು ಪಾಲಿಸತಕ್ಕದ್ದು. 
      4. ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಬಿ.ಎಂ.ಆರ್.ಸಿ.ಎಲ್ ಗಳನ್ನೊಳಗೊಂಡು ಸದ್ರಿ ಸಂಸ್ಥೆಯ ಮುಖ್ಯ                                     ಕಾರ್ಯನಿರ್ವಹಣಾಧಿಕಾರಿಗಳ ನಿರ್ದೇಶದನ್ವಯ ವಾರಾಂತ್ಯದಲ್ಲಿ ತುರ್ತು ಅವಶ್ಯಕತೆಯಾನುಸಾರ ಸಾರ್ವಜನಿಕರಿಗೆ              ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಾಚರಿಸುವುದು
 5. ಪಬ್ ಗಳು/ ಕ್ಲಬ್ ಗಳು / ರೆಸ್ಟೋರೆಂಟ್ ಗಳು / ಬಾರ್ ಗಳು / ಹೋಟೆಲ್ ಗಳು / ಹೋಟೆಲ್ ಗಳಲ್ಲಿ ಆಹಾರ ಸೇವಿಸಲು           ಕಾಯ್ದಿರಿಸುವ ಸ್ಥಳಗಳಲ್ಲಿ ಶೇ 50  ರಷ್ಟು ಆಸನ ಸಾಮರ್ಥ್ಯ ದೊಂದಿಗೆ ಕೋವಿಡ್ ಸೂಕ್ತ ನಡವಳಿಕೆಗೆ ಕಟ್ಟುನಿಟ್ಟಾಗಿ                   ಪಾಲಿಸುವುದರೊಂದಿಗೆ ಕಾರ್ಯ ನಿರ್ವಹಿಸುವುದು. ಹಾಗೂ 2  ಡೋಸ್ ಲಸಿಕೆಯನ್ನು ಪಡೆದಿರುವ ವ್ಯಕ್ತಿಗಳಿಗೆ ಮಾತ್ರ                ಇಂತಹ ಸ್ಥಳಗಳಿಗೆ ಪ್ರವೇಶ ಕಲ್ಪಿಸುವುದು.
    6.. ಸಿನಿಮಾ ಹಾಲ್/ ಮಲ್ಟಿಪ್ಲೆಕ್ಸ್/ ಥಿಯೇಟರ್ / ರಂಗಮಂದಿರಗಳು/ ಆಡಿಟೋರಿಯಂ ಮತ್ತು ಇಂತಹ ಇತರ ಸ್ಥಳ ಗಳಲ್ಲಿ             ಶೇ 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕೋವಿಡ್ ಸೂಕ್ತ ನಡವಳಿಕೆಗೆ ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ                       ಕಾರ್ಯನಿವಹಿಸುವುದು ಹಾಗೂ 2  ಡೋಸ್ ಲಸಿಕೆಯನ್ನು ಪಡೆದಿರುವ ವ್ಯಕ್ತಿಗಳಿಗೆ ಮಾತ್ರ ಇಂತಹ ಸ್ಥಳಗಳಿಗೆ ಪ್ರವೇಶ             ಕಲ್ಪಿಸುವುದು.
    7.. ತೆರೆದ ಪ್ರದೇಶಗಲ್ಲಿ ನಡೆಸುವ ಮದುವೆ ಕಾರ್ಯಕ್ರಮಕ್ಕೆ 200 ಜನರು ಮೀರದಂತೆ  ಹಾಗೂ ಹಾಲ್ ಗಳಲ್ಲಿ ನಡೆಸುವ               ಮದುವೆ ಕಾರ್ಯಕ್ರಮಕ್ಕೆ 100 ಜನರು ಪಾಲ್ಗೊಳ್ಳಲು ಮಾತ್ರ ಅವಕಾಶ ಹಾಗೂ ಈ ಸಂದರ್ಭದಲ್ಲಿ ಕೋವಿಡ್ ಸೂಕ್ತ               ನಡವಳಿಕೆಗೆ ಕಟ್ಟುನಿಟ್ಟಾಗಿ ಪಾಲಿಸತಕ್ಕದು.
    8..ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ತೆರೆಯಲು ಅವಕಾಶ . ಯಾವುದೇ ರೀತಿಯ ಸೇವೆ ಹಾಗೂ ಚಟುವಟಿಕೆಗಳಿಗೆ            ಅವಕಾಶವಿರುವುದಿಲ್ಲ. ಏಕ ಕಾಲದಲ್ಲಿ 2  ಡೋಸ್ ಪಡೆದಿರುವ 50  ಜನರಿಗೆ ಮಾತ್ರ ಪ್ರವೇಶ ಕಲ್ಪಿಸುವುದು
     9. ಮಾಲ್ ಗಳು,ಶಾಪಿಂಗ್ ಕಟ್ಟಡಗಳು, ಎಲ್ಲ ರೀತಿಯ ಸ್ವಯಂ ಅಂಗಡಿಗಳು ಹಾಗೂ ಸ್ಥಾಪನೆಗಳು  ವಾರದ ದಿನಗಳಲ್ಲಿ                ಎಂದಿನಂತೆ ಕಾರ್ಯಾಚರಿಸುವುದು..
  10. ಸ್ವಿಮಿಂಗ್ ಪೂಲ್ ಮತ್ತು ಜಿಮ್ ಗಳು ಶೇ 50  ರ ಸಾಮರ್ಥ್ಯದೊಂದಿಗೆ ಕಾರ್ಯಾಚರಿಸುವುದು ಹಾಗೂ 2  ಡೋಸ್                 ಪಡೆದಿರುವ ಜನರಿಗೆ ಮಾತ್ರ ಪ್ರವೇಶ ಕಲ್ಪಿಸುವುದು
      11.ಕ್ರೀಡಾ ಸಂಕೀರ್ಣಗಳು ಮತ್ತು  ಸ್ಟೇಡಿಯಂ ಗಳ ಶೇ 50  ಸಾಮರ್ಥ್ಯಕ್ಕೆ ಒಳ ಪಟ್ಟು ಕಾರ್ಯಾಚರಿಸುವುದು.
      12.ಎಲ್ಲ ರ್ಯಾಲಿ ಗಳನ್ನು,ಧರಣಿಗಳನ್ನು, ಪ್ರತಿಭಟನೆಗಳನ್ನು ನಡೆಸುವುದನ್ನು ನಿಷೇದಿಸಲಾಗಿದೆ. 

       13 .ಕೇರಳ ರಾಜ್ಯದಿಂದ ಹಾಗೂ ಮಹಾರಾಷ್ಟ್ರ ರಾಜ್ಯದಂತಹ ಗಡಿ ರಾಜ್ಯಗಳಿದ ಜಿಲ್ಲೆಗೆ ಆಗಮಿಸುವವರನ್ನು ಪತ್ತೆ ಹಚ್ಚಿ                 ಅಗತ್ಯ ಕ್ರಮವಹಿಸಲು ರಾಜ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾಗಿರುವ ಸುತ್ತೋಲೆ/             ನಿರ್ದೇಶನವನ್ನು ಪಾಲಿಸುವುದು ಹಾಗೂ ಸದರಿ ಮಾರ್ಗಸೂಚಿಗಳನ್ನು ಗೋವಾ ರಾಜ್ಯದಿಂದ ಜಿಲ್ಲೆಗೆ                                      ಆಗಮಿಸುವವರಿಗೂ  ವಿಸ್ತರಿಸಲಾಗಿದೆ.


ಕೋವಿಡ್ ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಹೊರಡಿಸಿದ ಮಾರ್ಗ ಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸತಕ್ಕದು , ಅಲ್ಲದೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅರೋಗ್ಯ ಇಲಾಖೆ ಪೊಲೀಸ್ ಇಲಾಖೆ ಮಾಲಿನ್ಯ ನಿಯಂತ್ರಣ ಮಂಡಳಿ , ಅಗ್ನಿಶಾಮಕ ಇಲಾಖೆ , ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳಿದ ಹೊರಡಿಸಲಾದ ಸೂಚನೆಗಳು/ ಮಾರ್ಗಸೂಚಿಗಳು/ ಪ್ರಮಾಣಿತ ಕಾರ್ಯ ವಿಧಾನ (SOP) ಗಳನ್ನು ಸಹ ಕಡ್ಡಾಯವಾಗಿ ಪಾಲಿಸತಕ್ಕದು.

ಮೇಲಿನ ಆದೇಶಗಳನ್ನು ಪಾಲಿಸದೆ ಇದ್ದವರ ಮೇಲೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ಗಳನ್ನು Disaster Management Act 2005,Karnataka Epidemic Diseases act 2020     ಮತ್ತು  IPC ಸೆಕ್ಷನ್ 188 ಪ್ರಕಾರ ನಿಯಮಾನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು  ಆದೇಶದಲ್ಲಿ ತಿಳಿಸಿದ್ದಾರೆ. ಜಾಹೀರಾತು

 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget