ಮೊದಲನೆ ಅಲೆ ತಬ್ಲಿಘಿ, ಮೂರನೆ ಅಲೆ ಕಾಂಗ್ರೆಸ್ ಹಬ್ಬಿಸುತ್ತಿದೆ: ಸಚಿವ ಸುನಿಲ್ ಕುಮಾರ್-Times Of Karkala

 ಮೊದಲನೆ ಅಲೆ ತಬ್ಲಿಘಿ, ಮೂರನೆ ಅಲೆ ಕಾಂಗ್ರೆಸ್ ಹಬ್ಬಿಸುತ್ತಿದೆ: ಸಚಿವ ಸುನಿಲ್ ಕುಮಾರ್-Times Of Karkala

ಬೆಂಗಳೂರು: ಮೇಕೆದಾಟು ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮೇಲಾಟದಲ್ಲಿ ಕೊರೊನ ಹಬ್ಬಿಸುವ ಪಾದ ಯಾತ್ರೆ ನಡೆಸುತ್ತಿದೆ ಮೊದಲನೇ ಅಲೆ ತಬ್ಲಿಘಿ ಹಬ್ಬಿಸಿದರೆ , ಮೂರನೇ ಅಲೆಯನ್ನ ಕಾಂಗ್ರೆಸ್ ಹಬ್ಬಿಸುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಮಂಗಳವಾರ ಹೇಳಿಕೆ ನೀಡಿದರು.

ಮೇಕೆದಾಟು ವಿಷಯದಲ್ಲಿ ಸರ್ಕಾರ ಬದ್ಧವಿದೆ ಯೋಜನೆ ಅನುಷ್ಠಾನಕ್ಕೆ ನಾವು ಕಟಿಬದ್ಧರಾಗಿದ್ದೇವೆ . ರಾಜ್ಯದಲ್ಲಿ ಕೊರೊನ ಹರಡುತ್ತಾ ಇದ್ದರೆ  ಅದಕ್ಕೆ ಕಾಂಗ್ರೇಸ್ ಕಾರಣ ಎಂದು ನಾನು ಆರೋಪಿಸುತ್ತೇನೆ . ಈ ನೆಲದ ಕಾನೂನನ್ನು ಕಾಂಗ್ರೆಸ್ ಗೌರವಿಸುವುದಿಲ್ಲ. ಲಸಿಕೆ ಬಂದಾಗ ಲಸಿಕೆ ತಿರಸ್ಕರಿಸಿದರು . ನೀರಿಗಾಗಿ ಅಲ್ಲ ನಾಯಕತ್ವಕ್ಕಾಗಿ ನಡೆಯುತ್ತಿರುವ ಪಾದಯಾತ್ರೆ . ಜನರ ಅರೋಗ್ಯ ದೃಷ್ಟಿಯಿಂದ ನಾಯಕರಿಗೆ  ಕಾಳಜಿ ಇರಲಿ ಎಂದರು.

ಸರ್ಕಾರವೇ ಕೋವಿಡ್ ಅಂಕಿ ಅಂಶ ಹೆಚ್ಚು ಮಾಡುತ್ತಿದೆ ಎಂಬ ವಿಚಾರಕ್ಕೆ ಕಿಡಿ ಕಾರಿದ ಅವರು ಕಾಂಗ್ರೆಸ್ ಗೆ  ಅಂಕಿ ಅಂಶದ ಮೇಲೆ ನಂಬಿಕೆ ಇಲ್ಲ. ಪಾದಯಾತ್ರೆ ಮಾಡುವ ಎಷ್ಟು ಜನರಿಗೆ ಪಾಸಿಟಿವ್ ಬಂತು . ಕಾಂಗ್ರೆಸ್ ನಾಯಕರಿಗೆ ಜವಾಬ್ದಾರಿ ಇಲ್ಲ . ಸಲಹೆ ಕೊಡಬೇಕಿದ್ದ ನಾಯಕರೇ ಮಕ್ಕಳ ಜೊತೆ ಸಭೆ ನಡೆಯಿಸಿ ಕರೋನ ವಿಸ್ತರಣೆ ಮಾಡುತ್ತ  ಇದ್ದಾರೆ ಎಂದರು.

ನಾಯಕರ ವಿರುದ್ಧ ಕ್ರಮ ಕೈಗೊಳ್ಳದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ನಿಯಮಾವಳಿ ಎಲ್ಲರಿಗೂ ಒಂದೆ, ಮೊಕದ್ದಮೆ ಹಾಕಿ ಬಂದನ ಮಾಡುವುದು ದೊಡ್ಡ ವಿಷಯವಲ್ಲ. ಸರಕಾರ ನಡೆಸಿದ್ದವರು ಅರ್ಥ ಮಾಡಿಕೊಳ್ಳಬೇಕು . ಆಗ ಇದ್ದ ಕಾಳಜಿ ಈಗ ಯಾಕೆ ವಿಪಕ್ಷಗಳಿಗೆ ಇಲ್ಲ.

ಕಾಂಗ್ರೆಸ್ ಅದಿಕಾರದ್ಲಲಿರುವ ರಾಜಸ್ತಾನ್ , ತಮಿಳುನಾಡು, ಕೇರಳದಲ್ಲಿ ಕಟ್ಟು ನಿಟ್ಟಿನ ಕ್ರಮ ಜಾರಿಯಲ್ಲಿದೆ ಬಂಧನ ಮಾಡುವುದು  ದೊಡ್ಡದಲ್ಲ ಎಂದರು.

ಬೆಂಗಳೂರಿನಲ್ಲಿ ಕೊರೊನ ಹೆಚ್ಚಾದರೆ ಕಾಂಗ್ರೆಸ್ ಕಾರಣ ಈ ರೀತಿ ರಾಜಕೀಯ ಮೇಲಾಟವನ್ನು ಕಾಂಗ್ರೆಸ್ ಬಿಡಬೇಕು . ಇದರ ಮರುಚಿಂತನೆಯನ್ನು ಕಾಂಗ್ರೆಸ್ ಬಿಡಬೇಕು ಎಂದರು. 

ಜಾಹೀರಾತು   

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget