ಕಾರ್ಕಳ:ನ್ಯಾಯಾಲಯದ ಸಿಬ್ಬಂದಿಗೆ ಆನ್ ಲೈನ್ ಮೂಲಕ ಪಂಗನಾಮ-Times Of Karkala

 ಕಾರ್ಕಳ:ನ್ಯಾಯಾಲಯದ ಸಿಬ್ಬಂದಿಗೆ ಆನ್ ಲೈನ್ ಮೂಲಕ ಪಂಗನಾಮ-Times Of Karkala 


 ಕಾರ್ಕಳ :ಆನ್ ಲೈನ್ ವ್ಯವಹಾರದ ಮೂಲಕ ವ್ಯಕ್ತಿಯೊಬ್ಬರು ವಂಚನೆಗೊಳಗಾದ ಘಟನೆ ನಡೆದಿದೆ.

ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಲಯದ ದ್ವಿತೀಯ ದರ್ಜೆ ಸಹಾಯಕ ಅಂದಾನಯ್ಯ ಸ್ವಾಮಿ ಹಿರೇಮಠ ಎಂಬವರು ಜ.7ರಂದು ಮೊಬೈಲ್ ರಿಚಾರ್ಜ್‌ನ್ನು ಪೇಟಿಎಂ ಮೂಲಕ ಮಾಡಲು ಪ್ರಯತ್ನಿಸಿದ್ದು ಅದು ಫೇಲ್ ಆದ ಕಾರಣ ಗೂಗಲ್‌ನಲ್ಲಿ ಸರ್ಚ್ ಮಾಡಿ ಕಸ್ಟಮರ್ ಕೇರ್ ನಂಬರ್‌ 8926099248 ಕರೆ ಮಾಡಿದರು. ಅವರ ಕೋರಿಕೆಯ ಮೇರೆಗೆ ಎನಿ ಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿ, ತನ್ನ ಎಟಿಎಂ ಮತ್ತು ಬ್ಯಾಂಕ್ ಖಾತೆಯ ವಿವರವನ್ನು ಒದಗಿಸಿದರು. ಆ ಕೂಡಲೇ ಅವರ ಎರಡು ಬ್ಯಾಂಕ್ ಖಾತೆಯಿಂದ ಒಟ್ಟು 43,399ರೂ. ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚನೆ ಎಸಗಿದ್ದಾರೆ, ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget