ಹೆಬ್ರಿ:ನಾನು ಕಲಿತ ಶಾಲೆಗೆ ನನ್ನ ಕೊಡುಗೆ ಎಂಬ ವಿನೂತನ ಕಾರ್ಯಕ್ರಮ:ಹಳೆ ವಿದ್ಯಾರ್ಥಿಗಳಿಂದ ಶಾಲೆಗೆ ಬೆಂಚ್ ಡೆಸ್ಕುಗಳನ್ನು ಹಸ್ತಾಂತರ-Times Of Karkala

ಹೆಬ್ರಿ:ನಾನು ಕಲಿತ ಶಾಲೆಗೆ ನನ್ನ ಕೊಡುಗೆ ಎಂಬ ವಿನೂತನ ಕಾರ್ಯಕ್ರಮ:ಹಳೆ ವಿದ್ಯಾರ್ಥಿಗಳಿಂದ  ಶಾಲೆಗೆ ಬೆಂಚ್ ಡೆಸ್ಕುಗಳನ್ನು ಹಸ್ತಾಂತರ-Times Of Karkala

ಹೆಬ್ರಿ: ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಳೆವಿದ್ಯಾರ್ಥಿಗಳಿಂದ ನಾನು ಕಲಿತ ಶಾಲೆಗೆ ನನ್ನ ಕೊಡುಗೆ ಎಂಬ ವಿನೂತನ ಕಾರ್ಯಕ್ರಮದಲ್ಲಿ 1993 ಹಾಗೂ 94 ನೇ ಸಾಲಿನ ಹಳೆ ವಿದ್ಯಾರ್ಥಿಗಳು ಶಾಲೆಗೆ ಬೆಂಚ್ ಡೆಸ್ಕುಗಳನ್ನು ಹಸ್ತಾಂತರಿಸಿದರು.

ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್ ಮಾತನಾಡಿ ಇದೊಂದು ವಿಭಿನ್ನ ಹಾಗೂ ವಿನೂತನವಾದ ಕಾರ್ಯಕ್ರಮವಾಗಿದೆ. ಹಳೆ ವಿದ್ಯಾರ್ಥಿಗಳೆಲ್ಲಾ ಸೇರಿ ಶಾಲೆಯ ಬಗೆಗೆ ತೋರಿದ ಕಾಳಜಿ ಶ್ಲಾಘನೀಯವಾದುದು. ಶಾಲೆಗೆ ಮಕ್ಕಳೇ ಆಸ್ತಿ ಎಂಬುದನ್ನು ಮತ್ತೆ ನೆನಪಿಸುತ್ತದೆ. ಈ ರೀತಿಯ ಮಾದರಿ ವಿಭಿನ್ನ ಕಾರ್ಯಕ್ರಮಗಳು ಎಲ್ಲ ಸರ್ಕಾರಿ ಶಾಲೆಗಳಲ್ಲಿ ನಡೆಯಲಿ ಎಂದು ಹಾರೈಸಿದರು. ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. 

1993 - 94 ನೇ ಸಾಲಿನ ಹಳೆ ವಿದ್ಯಾರ್ಥಿಗಳು ಶಾಲೆಗೆ ಬೆಂಚ್ ಡೆಸ್ಕುಗಳನ್ನು ಹಸ್ತಾಂತರಿಸಿ ಗುರುಗಳಾದ ಶಿವಣ್ಣ ಹೆಗ್ಡೆ, ಮರಿಯಕ್ಕ ಹಾಗೂ ಪ್ರೇಮ ಎಂ ಅವರಿಗೆ ಗುರುವಂದನೆ ಸಲ್ಲಿಸಿದರು. 



ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶುಭದರ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಸನತ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ನಾಯಕ್, ಮುಖ್ಯಶಿಕ್ಷಕ ಶ್ರೀನಿವಾಸ್ ಭಂಡಾರಿ, ಶಿಕ್ಷಣ ಇಲಾಖೆಯ ವೆಂಕಟರಮಣ ಕಲ್ಕೂರ್, ಪ್ರತಿಮಾ, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಹೀರಾತು






























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget