ಕಾರ್ಕಳ:ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಮಹಿಳೆ:ರಕ್ಷಣೆ ಮಾಡಿದವರಿಗೆ ನಿಂದನೆ-Times of karkla

ಕಾರ್ಕಳ:ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಮಹಿಳೆ:ರಕ್ಷಣೆ ಮಾಡಿದವರಿಗೇ ನಿಂದನೆ-Times of karkala 

ಇಲ್ಲಿನ ಸುವಿಧಾ ಅಪಾರ್ಟ್ಮೆಂಟ್ ನಲ್ಲಿ ವಾಸವಿರುವ ಸುಮನಾ ಆಚಾರ್ಯ ರವರು ಲಿಫ್ಟ್ ನಲ್ಲಿ ಹೋಗುವಾಗ ಲಿಫ್ಟ್ ಅರ್ಧಕ್ಕೆ ನಿಂತಿದ್ದು , ಸಹಾಯಕ್ಕಾಗಿ ಸುಮನಾ ರವರು ತುರ್ತು ಗಂಟೆ ಒತ್ತಿದಾಗ ನೆರೆಯವರು ಬಂದು ಬಾಗಿಲು ತರೆಯಲು ಪ್ರಯತ್ನಿಸಿದರೂ ಲಿಫ್ಟ್ ಬಾಗಿಲು‌‌ ತೆರೆಯಲಿಲ್ಲ.

ಮಹಡಿಯ ಯುವಕನೊಬ್ಬ  ಅಪಾರ್ಟ್ಮೆಂಟ್ ನ ಅಧ್ಯಕ್ಷರಾದ ಮಹೇಶ್ ಎಂಬುವರನ್ನು ಫೋನ್ ಮಾಡಿ ಬಾಗಿಲು ತರೆಯಲು ತಿಳಿಸಿದ್ದರು. ಆದರೆ ಅವರೂ ಕೂಡ ಅವರು  ಸಹಾಯಕ್ಕೆ ಬಾರದ ಕಾರಣ ನೆರೆಯವರೇ ಸೇರಿ ಬಾಗಿಲು  ತೆಗೆದಿದ್ದು , ತದ ನಂತರ ಅಲ್ಲಿಗೆ ಬಂದ ಮಹೇಶ್ ಹಾಗೂ ಹೆಂಡತಿ ರಶ್ಮಿ ಎಂಬುವವರು ಬಾಗಿಲು ತರೆಯಲು ಯಾರು ಹೇಳಿದ್ದು ಸತ್ತವರು ಸಾಯಲಿ ಎಂದು ಅವಾಚ್ಯ ಪದಗಳಿಂದ ಬೈದಿದ್ದಾರೆ.

ಅಲ್ಲದೆ ಮಹೇಶನು ಸುಮನಾರವರ  ಅವರ ಮೇಲೆ ಹಲ್ಲೆ ಮಾಡಿದ್ದಾರೆ. 

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ವರದಿ: 

ಕಾರ್ಕಳ: ಪಿರ್ಯಾದಿದಾರರಾದ ಸುಮನ ಆಚಾರ್ಯ (40), ತಂದೆ: ಅನಂತಯ್ಯ ಆಚಾರ್ಯ, ವಾಸ: ನಂಬ್ರ-315, 3 ನೇ ಮಹಡಿ, ಸುವಿಧಾ ಅಪಾರ್ಟ್‌ಮೆಂಟ್, ಪೆರ್ವಾಜೆ ರೋಡ್, ಕಸಬಾ ಕಾರ್ಕಳ ತಾಲೂಕು ಇವರು ಕಾರ್ಕಳ ಕಸಬಾದ ಪೆರ್ವಾಜೆಯಲ್ಲಿರುವ ಸುವಿಧಾ ಅಪಾರ್ಟ್‌ ಮೆಂಟ್‌ನಲ್ಲಿ 3 ನೇ ಮಹಡಿಯಲ್ಲಿ ನಾಲ್ಕೂವರೆ ವರ್ಷಗಳಿಂದ  ವಾಸವಾಗಿದ್ದು ದಿನಾಂಕ 12/01/2022 ರಂದು ಬೆಳಿಗ್ಗೆ 09:00 ಗಂಟೆಗೆ ಮಿಕ್ಸಿ ರಿಪೇರಿ ಅಂಗಡಿಗೆ ಪೆರ್ವಾಜೆಗೆ ಹೋಗಿ ವಾಪಾಸು ಬಂದು ಅಪಾರ್ಟ್‌ ಮೆಂಟ್‌ನ ಮೂರನೇ ಮಹಡಿಯಲ್ಲಿರುವ ತನ್ನ ಮನೆಗೆ ಹೋಗುವ ಸಮಯ ಲಿಫ್ಟ್ ಅರ್ಧದಲ್ಲಿಯೇ ನಿಂತಿದ್ದು ಲಿಪ್ಟ್‌ ನ ತುರ್ತು ಗಂಟೆ ಒತ್ತಿದಾಗ ಪರಿಚಯದ ದಿಶಾ ಮತ್ತು ಆಕೃತಿ ಬಟ್ಟೆ ಅಂಗಡಿಯವರು ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಬಾಗಿಲು ತೆರೆಯಲು ಆಗದ ಕಾರಣ 4 ನೇ ಮಹಡಿಯ ಯುವಕನೊಬ್ಬ  ಬಂದು ಅಪಾರ್ಟ್‌ಮೆಂಟ್‌ನ ಅಧ್ಯಕ್ಷರಾದ ಅಪಾದಿತ ಮಹೇಶ ಎಂಬಾತನಿಗೆ ಫೋನ್ ಮಾಡಿ ಬಾಗಿಲು ತೆರೆಯಲು ತಿಳಿಸಿದ್ದು, ಮಹೇಶನು ಬಾರದ ಕಾರಣ ನಂತರ 4 ನೇ ಮಹಡಿಯಲ್ಲಿ ಬಾಡಿಗೆಗೆ ಇರುವ ಯುವಕ  ಮತ್ತು  ಆಕೃತಿ ಬಟ್ಟೆ ಅಂಗಡಿಯವರು  ಸೇರಿ  ಬಾಗಿಲು ತೆರೆದಿದ್ದು ಪಿರ್ಯಾದಿದಾರರು ಲಿಪ್ಟ್ ನಿಂದ  ಹೊರಬರುವ ಸಮಯ  09:35 ಗಂಟೆಗೆ ಅಪಾದಿತ ಮಹೇಶ ಮತ್ತು ಆತನ ಹೆಂಡತಿ ರಶ್ಮಿರವರು ಲಿಫ್ಟ್ ಹತ್ತಿರ ಬಂದು ಲಿಪ್ಟ್ ಬಾಗಿಲು ತೆರೆಯಲು ನಿಮಗೆ ಯಾರು ಅನುಮತಿ ನೀಡಿದ್ದು, ಸಿಕ್ಕಿಕೊಂಡವರು ಬೇಕಾದರೆ ಸಾಯಲಿ ಎಂದು ಹೇಳಿ ಹೇಳಿದ್ದಲ್ಲದೇ, ನಂತರ ಪಿರ್ಯಾದಿದಾರರು ಬಜಾಜ್ ಫೈನಾನ್ಸ್ ಬಳಿ ಮೆಟ್ಟಿಲು ಹತ್ತಿ ಹೋಗುತ್ತಿರುವಾಗ ಅಪಾದಿತರು ನಿಮ್ಮಂತವರು ಅಪಾರ್ಟ್‌ಮೆಂಟ್‌ನಲ್ಲಿರಬಾರದು ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಅಪಾದಿತ  ಮಹೇಶನು ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ ಪರಿಣಾಮ ಬಲಭುಜಕ್ಕೆ ಒಳನೋವು ಆಗಿದ್ದು  ಕಾರ್ಕಳ ಸ್ಪಂದನ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2022  ಕಲಂ: 354,504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget